ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ. ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ. ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು. == ಇತಿಹಾಸ == ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು. == ಕಟ್ರಿನಾ ಚಂಡಮಾರುತ == ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ. == ಭೌಗೋಳಿಕ ==